Saturday, June 22, 2013

ಪಾಪನಾಶಿನಿ ಗಂಗೆಯ ಅಳಲು ಕೇಳದಾಯಿತೇ ಸಮಾಜ... !!!




ಭಗೀರಥ ಮತ್ತು ಅವನ ಪೂರ್ವಜರ ಅದೆಷ್ಟು  ಪರಿಶ್ರಮದ ಫಲ ಗಂಗೆ ಭೂಮಿಗೆ ಹರಿದಳು, ಭಾಗಿರಥಿಯಾದಳು. ಭೂಮಿಗೆ ಬರುವ ಮೊದಲೇ ಗಂಗೆ ಬ್ರಹ್ಮನಲ್ಲಿ ಮಾಡಿದ್ದ ಮನವಿ ಸತ್ಯವಾದದ್ದೆ ಎಂದು ಈಗ ಸಾಬೀತಾಗಿದೆ. ಭೂಲೋಕ ಬರೀ ಕೆಟ್ಟ ಮನಸ್ಸಿನ ಜನ, ಕೊಳಕು ಸ್ಥಿತಿ ತುಂಬಿದೆ, ನಾನು ಹೋಗಬೇಕಾದದ್ದು ಅನಿವಾರ್ಯವೇ ಎಂಬ ಮನವಿ ಇಟ್ಟಿದ್ದಳು ಗಂಗಾಮಾತೆ. ಆ ತಾಯಿ ಎಷ್ಟೋ ಪ್ರಯತ್ನಗಳ ಫಲವಾಗಿ (ಅದೂ ನಮ್ಮ ಪ್ರಯತ್ನ ಅಲ್ಲವೇ ಅಲ್ಲ!!!)   ಇಳಿದು ಬಂದಿದ್ದೆ ನಮ್ಮ ಪುಣ್ಯವಾಗಿದೆ.  ಭಗೀರಥನ ಪ್ರಯತ್ನದಿಂದ ಅವನಿಗಷ್ಟೇ ಅಲ್ಲದೆ  ನಮಗೆಲ್ಲರಿಗೂ ಆ ಮಾತೆಯ ದರ್ಶನವಾಗಿದೆ.  

ಜನಗಳಿಗೆ ಅದರ ಹಿಂದಿನ ಕಷ್ಟಗಳು ,ಯಾರದೋ ಪರಿಶ್ರಮ ಯಾವುದು ಬೇಕಾಗಿಲ್ಲ.ತನ್ನ ಕೈಗೆ ಸಿಕ್ಕಿದ ವಸ್ತು, ಅದರ ಬೆಲೆಯ ಅರಿವೂ ಇಲ್ಲದೆ ದುರುಪಯೋಗ ಪಡಿಸೋ ಯೋಚನೆಗಳೇ ಜಾಸ್ತಿ. ಗಂಗೆಯ  ಮೂಲ ಹರಿವನ್ನೇ ಬದಲಿಸುವತ್ತ ಹೊರಟಿದೆ ಈಗಿನ ಜನರ ಮನಸ್ಥಿತಿ, Dam ಕಟ್ಟಿ ಅದರ ಸ್ವತಂತ್ರ ಹರಿವಿಗೆ ಅಡ್ಡಿ ಪಡಿಸಿ ಮಾನವನಿಗೆ ಇಷ್ಟ ಬಂದ ದಾರಿಯಲ್ಲಿ ಬಲವಂತದಿಂದ ಪಥ ಬದಲಿಸೋ ಯೋಚನೆ ದುರಾದೃಷ್ಟಕರ.  ಅವಳು ಪಾಪನಾಶಿನಿ. ಅಂತ  ಜೀವನದಿಯನ್ನೇ ಮಲಿನ ಪಡಿಸಿ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ರೀತಿ ಎನ್ನೋ ಗಾದೆಯನ್ನ ಅಕ್ಷರಶಃ ಪಾಲಿಸಿದೆ ಜನಾಂಗ..!!!


ಗಂಗೆ ಸ್ವತಂತ್ರಳಾಗಬೇಕು.ಅವಳು ಅಳೋದನ್ನ ನೋಡಿಕೊಂಡು ಇದ್ದುಬಿಟ್ಟಿದ್ದು ಸಾಕೇ ಸಾಕು. ತ್ರಿಪಥಗಾಮಿನಿ ಆದ  ಆ ನದಿ ತನ್ನ ಇಷ್ಟದ ರೀತಿಯಲ್ಲೇ ಹರಿಯಲಿ. ಅದುಬಿಟ್ಟು ಬಲವಂತದ ಮುಖೇನ ಮಾನವನ ಪೌರುಷ ತಾಂಡವ ಆಡಿದರೆ  ವಿಕೋಪಗಳು ತಲೆದೊರೋದು ಸಹಜ. ಮಾನವ ಎಷ್ಟೇ ಬೃಹತ್ ಆಗಿ ಬೆಳೆದರೂ, ಗಂಗೆ ಮುನಿಸಿಕೊಂಡರೆ ಅವಳ ಮುಂದೆ ತಾನು ಸೋತು ನೆಲಸಮವಾಗಲು ಕ್ಷಣ ಮಾತ್ರವೇ ಸಾಕು. ಇನ್ನಾದರೂ ಪ್ರಕೃತಿಯ ಎಚ್ಚರಿಕೆಗಳನ್ನು ಅರ್ಥ ಮಾಡಿಕೊಂಡು ಜನತೆ ತಮ್ಮ ಮನಸ್ಸನ್ನು ಶುದ್ಧಗೊಳಿಸಿ ಮುನ್ನಡೆಯಬೇಕಾಗಿದೆ. ಮಕ್ಕಳೇ ಮುಳುವಾದರೆ ಅಮ್ಮನಿಗೆ ಆಸರೆ ಇನ್ನ್ಯಾರು? . ಬುದ್ಧಿಜೀವಿಗಳೇ ಯೋಚಿಸಿ, ಎಲ್ಲಾ ಒಟ್ಟಾಗಿ ಗಂಗೆಯ ಉಳಿವಿಗಾಗಿ ಜತೆಯಾಗೋಣ.           


 



Saturday, February 16, 2013

ಅಟ್ಟಹಾಸ.... ಮತ್ತೆ ವೀರಪ್ಪನ್ ಯುಗದತ್ತ ....!!!



ನೈಜ ಘಟನೆ ಚಿತ್ರರೂಪದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿಯಲ್ಲಿ ತೋರಿಸುವುದಿದ್ದರೆ ಆ ಯಶಸ್ವೀ ನಿರ್ದೇಶಕರಲ್ಲಿ ಒಬ್ಬರಂತು  ಎಂ.ಎಸ್  ರಮೇಶ್ ...... ಈ ಮೊದಲು ಬಂದಿದ್ದ "ಸಯನೈಡ್ " ಚಿತ್ರವು ಅಷ್ಟೇ ಪರಿಣಾಮಕಾರಿಯಾಗಿ ಬಿಂಬಿಸಿದವರು. ಅದನ್ನೇ ಮನಸ್ಸಲ್ಲಿಟ್ಟುಕೊಂಡು  ಈಗ ಬಂದ "ಅಟ್ಟಹಾಸ " ಸಿನೆಮಾಗೂ ಹೋಗೋಣ ಎಂದು ನಿರ್ಧರಿಸಿ ಉತ್ಸಾಹದಿಂದ ಹೊರಟೆ ಕಾರಣ ಇದೂ ಕೂಡ ಒಂದಷ್ಟು ದಶಕಗಳ  ಕಾಲ 3  ರಾಜ್ಯಗಳಲ್ಲಿ ಭೀತಿ ಹುಟ್ಟಿಸಿದ್ದ ದಂತಚೋರ  ವೀರಪ್ಪನ್ ಕುರಿತಾದ್ದರಿಂದ.



ನಂಬಿಕೆಗೆ ನಿರಾಸೆ ಮಾಡದೆ , ಪ್ರೇಕ್ಷಕನ ಕುತೂಹಲಗಳಿಗೆ ಹಲವು ಮಾಹಿತಿಗಳು ಚಿತ್ರದಲ್ಲಂತು ಇದ್ದೇ ಇವೆ.  ಸಾಮಾನ್ಯವಾಗಿ ಗೊತ್ತೇ ಇರೊ ಕತೆ ಅಂದುಕೊಂಡು ನೋಡಲು ಬಂದರೂ ಹಲವು ವಿಷಯಗಳು, ಕೆಲವೊಂದು ಘಟನೆಗಳ ಕುತುಹಲಭರಿತ ಮಾಹಿತಿಗಳು ನಿಮಗೆ ಸಿಗೋದರಲ್ಲಿ ಸಂದೇಹ ಬೇಡ. ನೈಜ ಘಟನೆ ಆದರಿಸಿ ಮಾಡಿದ ಚಿತ್ರವಾದ್ದರಿಂದ, ನೋಡಲು ಬರೋ ಜನರ ಕುತೂಹಲಕ್ಕೆ ನಿರಾಸೆ ಆಗಬಾರದೆಂಬ ಉದ್ದೇಶ ಇಟ್ಟುಕೊಂಡು ನಿರ್ದೇಶಕರು ಒಂದು ಸವಾಲಿನಂತೆ ಅದನ್ನು ಸ್ವೀಕರಿಸಿ ಚಿತ್ರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರಕ್ಕೆ ಜೀವಾಳವೇ ಆದವರು ಕಿಶೋರ್. ಪಾತ್ರಕ್ಕೆ ಹೇಳಿ ಮಾಡಿಸಿದಂತೆ ತೋರುತ್ತಾರೆ. ವೀರಪ್ಪನ್ ಗೆ ಜೀವ ತುಂಬಿ ಅಭಿನಯಿಸಿದ್ದಾರೆ. ವೀರಪ್ಪನ್ ಮತ್ತೆ ಬಂದನೇನೋ ಅನ್ನುವಸ್ಟು ಹೊಂದಾಣಿಕೆಯಾಗಿದೆ ಆ ಪಾತ್ರ ಅವರಿಗೆ. ಎಲ್ಲ ದೃಶ್ಯದಲ್ಲೂ ವೀರಪ್ಪನ್ ಹೋಲಿಕೆ  ಅವರಿಗಿದೆ. ಅವರ ಪ್ರತಿಭೆ ಇಲ್ಲಿ ಎದ್ದು ಕಾಣುವುದಂತು ಸತ್ಯ.







ಕಾಡುಗಳ್ಳ ನೊಂದಿಗಿನ ಹೋರಾಟದಲ್ಲಿ ಮಡಿದ ಪೋಲೀಸರೆಸ್ಟೋ. ನರಹಂತಕನ ಮಟ್ಟಹಾಕಲು ಪೊಲೀಸರು ನಡೆಸುವ ಒಂದೊಂದು ರಹಸ್ಯ ಕಾರ್ಯಾಚರಣೆ, ಯೋಜನೆ ಎಲ್ಲವೂ ಪ್ರೇಕ್ಷಕನ ಕುತೂಹಲಕ್ಕೆ ಸರಿಯಾದ ಮಾಹಿತಿ ಒದಗಿಸಿವೆ. ಇದು ಒಬ್ಬ ಕ್ರಿಮಿನಲ್ ಕತೆಯಾದರೂ ಎಲ್ಲೂ ಅಸಭ್ಯ ಮಾತುಗಳ ಬಳಕೆಯಾಗಿಲ್ಲ,ಅನಾವಶ್ಯಕ ಎಳೆತವಿಲ್ಲ. ಎಲ್ಲದರ ಬಗ್ಗೆಯೂ ಚಿತ್ರ ತಂಡ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದೆ. ಕ್ಯಾಮೆರಾ ವರ್ಕ್  ಕೂಡ ಇಲ್ಲಿ  ವರ್ಣಿಸಲೇ ಬೇಕು.  ಇಂತ ಒಂದು ನೈಜ ಘಟನೆ ಆದಾರಿತ  ಚಿತ್ರ ಇತ್ತೀಚಿನ ಸಿನಿಮಾಗಳಿಗೆ ಹೋಲಿಸಿದರೆ  ಒಂದು  ಬದಲಾವಣೆ ಕೊಡುವುದಂತೂ ಸತ್ಯ.  ಇಂತ ಸಿನೆಮಾಗಳ ಪ್ರಯತ್ನ ಆದಾಗ ಪ್ರೊತ್ಸಾಹಿಸಲು ಹಾಗೂ ಒಂದು ಒಳ್ಳೆಯ ಚಿತ್ರ ಬಹಳ ದಿನಗಳ  ಮೇಲೆ ಬಂದಿರುವಾಗ ತಪ್ಪದೆ ಒಮ್ಮೆ ನೋಡಲೇಬೇಕು .            

 


Saturday, January 26, 2013

Cell(Kill...) Phones in society....


Some incidents around us make really irritating when it comes about Cell Phones. 






You might have experienced while travelling in public transport, some peculiar persons are such away that they are situated in any public area. Peculiar, I am not using rough words on that person even if I am also getting irritated. Well, Why I call them as Peculiar becoz if they really want to listen music in that case they can carry headphones with them, but their heart won't listen for that. Public forced to listen songs from their cell. Really they are willing to show that they have good collection of things/Awesome speaker , I am still on hunt ;-)  These are one category which should be ignored in society. If some senior citizen says like If you are interested to listen songs, please use Ur earphone... That time we shouldn't miss to watch their face which is fully shaped out..!!!

When It comes to once again public transport, Sometimes I think that the generation really crossed humanity. Each person in society expect bit of humanity from others. That also lost nowadays. It may be in bus, Suppose person gets into bus, The first step is to collect ticket or at least when conductor comes near him/her , should show concern on his duty and collect ticket. But we can see, listening music or talking in mobiles are such a nonsense that when conductor asks to take ticket then also they are busy in cells. As a first step to humanity, we have to respect his/her job and show interest for that. At least we can hold call or we can call later after taking tickets. This is major nuisance for all public transport conductors, Even it is dangerous while getting into or getting down from bus, Your earphones will make deaf and you are not aware of any horn/vehicles sound while crossing roads and ends up in tragedy. That's the major cause nowadays for road accidents. While driving also It is very bad habit to cultivate playing music player from your cell phones.

Once upon a time, there where some respect when senior citizen comes near us and talks to us. But now, generation will give respect by removing headphones. That is the least respect remaining in current generation.Funny but serious case where we reached now.

Guys, Where are we going? Where is our attitude going...? At least we should think that, in society/ public transport , people around us should feel good to be in that surrounding (Not by playing melody track in phone...!!). Some matter around us are really dangerous but creates funny incidents as well.


   




Humble request on highlighted category, please think on that and use your cellphones in right time/right way/right surrounding. Hope we will see good everywhere in society.